Monday, March 14, 2016

On Sarah Koenig's Serial and Voyeurism in Media: Kannada Prabha Column

Here is a bit of a rant - if I had to name just one thing I hated the most, then it has to be the lack of professionalism. This quality has made me burn way too many bridges than I am proud of, but I am a bit of a stickler for it. To generalize a bit, in my years of being a freelance writer, I have discovered again and again that foreign media houses and publications are so incredibly more professional compared to the negligence most Indian places show. There is little regard for a writer's time, words and the payments due. Especially with edits, they do not show the respect due to a writer. And I find it appalling. While this certainly is not the case with most of the editors I have personally worked with, some go the other extreme to spoil the whole joy of writing for me.

I must write a longer post on this, I realize. How I wish I could name some names here. Sigh.

My most recent Kannada Prabha column was nearly entirely re-written, with utter disregard to the tone of the topic, with the name of the podcast I was writing about, Serial, was taken to mean a television series! A doubt that a simple web search would have clarified. It is majorly embarrassing for such less than mediocre editing to be carried under my name. 

Ok, this certainly requires a longer post. For now, here is the column below, fully unedited. (Please ignore typos.)

ಗುರುವಾರ ಬಂತೆಂದರೆ ಸೀರಿಯಲ್ ಅಡಿಕ್ಟ್ ಗಳಿಗೆ ಹಬ್ಬ. ಸೀರಿಯಲ್ ಶುರುವಾಗುವುದು ವಿಶಾಲ ಅಂತರ್ಜಾಲದ ಒಂದು ಪುಟ್ಟ ಮೂಲೆಯಲ್ಲಿ. ಟೀವಿಯಲ್ಲಿ ಬರುವ ಸೀರಿಯಲಿನ ಹಾಗೆ ಪ್ರಾರಂಭದಲ್ಲಿ, ಕೊನೆಯಲ್ಲಿ ಮತ್ತು ಮಧ್ಯ-ಮಧ್ಯದಲ್ಲಿ ಸ್ವಲ್ಪ ರೇಗಿಸುವ ಜಾಹಿರಾತುಗಳು ಬರುತ್ತವೆ. ಇದೊಂದು ಪಾಡ್ ಕಾಸ್ಟ್, ಅದರ ಹೆಸರು 'ಸೀರಿಯಲ್' ಎಂದು. ಪಾಡ್ ಕಾಸ್ಟ್ ಎಂದರೆ ಅಂತರ್ಜಾಲದ ಮೂಲಕ ಬರುವ ರೇಡಿಯೋ ಧಾರಾವಾಹಿಯಹಾಗೆ. ಟೀವಿ, ಇಂಟರ್ನೆಟ್, ಎಲ್ಲಾ ವಿಷಯವನ್ನು ಸ್ಕ್ರೀನುಗಳ ಮೂಲಕವೇ ವಿತರಿಸುವ, ಗ್ರಹಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡ ಆಧುನಿಕ ಜಗತ್ತಿನಲ್ಲಿ ರೇಡಿಯೋ ಧಾರಾವಾಹಿಗಳಿಗೆ ಸ್ಥಾನವಿದೆಯೇ, ಕೇವಲ ಶ್ರವ್ಯ ಮಧ್ಯಮಕ್ಕೆ ಗ್ರಾಹಕರ ಗಮನವನ್ನು ಹಿಡಿದಿಡುವ ಸಾಮರ್ತ್ಯ ಇದೆಯೇ ಎಂಬ ಪ್ರಶ್ನೆಗಳಿರುವ ವಾತವರಣದಲ್ಲಿ 'ಸೀರಿಯಲ್' ಹುಟ್ಟಿಕೊಂಡಿತು.

ಸಾರ ಕೇನಿಗ್ ಎಂಬ ಅಮೇರಿಕನ್ ಪತ್ರಕರ್ತೆ ಒಂದು ಕೊಲೆ ಪ್ರಕರಣದ ಕಥೆಯನ್ನು ಹನ್ನೆರಡು ಕಂತುಗಳಲ್ಲಿ ಪಾಡ್ ಕಾಸ್ಟ್ ಮಾಡಿದರು. ಕೆಲವೊಂದು ಕೊಲೆ, ಅತ್ಯಾಚಾರದ ಪ್ರಕರಣಗಳು ರಾಷ್ಟ್ರ ಮಟ್ಟದಲ್ಲಿ ಜನರ ಗಮನ ಸೆಳೆದು ಚರ್ಚೆಗೆ ಒಳಗಾಗಿ ಕಾನೂನಿನಲ್ಲಿ, ಸಮಾಜದಲ್ಲಿ ಬದಲಾವಣೆಗೆ ದಾರಿ ಮಾಡಿ ಕೊಟ್ಟು ಮೈಲುಗಲ್ಲಿನ ಪ್ರಕರಣವಾಗಿ ಸಾಮುದಾಯಿಕ ನೆನಪಿನಲ್ಲಿ ಉಳಿದುಕೊಳ್ಳುತ್ತದೆ. ಕೇನಿಗ್ ವಿಮರ್ಶಿಸಿ ಬರೆದು ಹೇಳಿದ ಕೊಲೆಯ ಕಥೆ ಈ ರೀತಿಯ ಕೇಸ್ ಅಲ್ಲ. ಅಮೇರಿಕಾದ ಬಹು ಪಾಲು ಜನರು ಕೇಳಿಯೇ ಇರದ ಸಣ್ಣ ಊರೊಂದರಲ್ಲಿ ಒಬ್ಬ ಹೈ ಸ್ಕೂಲ್ ವಿದ್ಯಾರ್ಥಿಗೆ ತನ್ನ ಮಾಜಿ ಗರ್ಲ್ ಫ್ರೆಂಡ್ ಅನ್ನು ಕೊಲೆ ಮಾಡಿದ ಆರೋಪದ ಮೇಲೆ ಜೀವಾವದಿ ಶಿಕ್ಷೆ ವಿಧಿಸಲಾಗುತ್ತದೆ. ಹದಿನೈದು ವರ್ಷಗಳ ಹಿಂದೆ ನಡೆದ ಘಟನೆ ಇದು. ಕೊಲೆಯ ನಂತರ ನಡೆದ ತನಿಕೆಯಲ್ಲಿ ಹಲವು ತೊಂದರೆಗಳು ಕಂಡುಬಂದಿರುತ್ತವೆ. ಸಾಕ್ಷಿಗಳಲ್ಲಿ, ಹೇಳಿಕೆಗಳಲ್ಲಿ ಹಲವು ವ್ಯತ್ಯಾಸಗಳು ಗಮನಸೆಳೆಯುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ಕೊಲೆ ಮಾಡಿದ ಅದ್ನಾನ್ ಸಯ್ಯದ್ ನಿಜವಾಗಿಯೂ ಕೊಲೆಗಾರನೇ ಅಥವಾ ನಿರಪರಾದಿಯಾಗಿರಬಹುದೇ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಕೇನಿಗ್ ಪ್ರಯತ್ನಪಡುತ್ತಾರೆ.

ಸೀರಿಯಲ್ ನ ಪ್ರತಿಯೊಂದು ಎಪಿಸೋಡ್ ಕೇಳುಗರನ್ನು ವಿಪರೀತವಾಗಿ ಹಿಡಿದಿದುವಂತದ್ದು. ಕೇನಿಗ್ ನಿರೂಪಣೆ ಮಾಡುವ ಶೈಲಿ ಪುರಾತನ ಕಾಲದ ಕಥೆಗಾರನೊಬ್ಬ ಇರುಳಾದಂತೆ ಬೆಂಕಿಯ ಸುತ್ತ ಕುಳಿತು ಗುಹೆಯ ಬೇರೆ ನಿವಾಸಿಗಳಿಗೆ ಕಥೆ ಹೇಳುತ್ತಿರುವ ಭಾವನೆಯನ್ನು ಕಲ್ಪಿಸುತ್ತದೆ. ಇಲ್ಲಿ ಈ ನಿರೂಪಣೆ ಶೈಲಿಯ ವಿಷಯ, ಈ ಸೀರಿಯಲ್ ನಿಂದ ಆದ ಪ್ರಭಾವ ಬಹಳಷ್ಟು ತಿಂಗಳ ಕಾಲ ಚರ್ಚೆಗೆ ಒಳಗಾಯಿತು. ಕೇನಿಗ್ ಈ ಕಥೆಯನ್ನು ಬಹಳ ನಾಟಕೀಯವಾಗಿ, ತುಂಬಾ ಭಾವಪೂರಕವಾಗಿ ಹೇಳುವುದರಿಂದ ಮೊದಲಿನಿಂದಲೇ ಕೇಳುಗರು ಈ ಕೇಸಿನ ಬಗ್ಗೆ ತಮ್ಮದೇ ಆದ ಅನಿಸಿಕೆ, ತೀರ್ಮಾನಗಳನ್ನು ಮೂಡಿಸತೊಡಗಿದರು. ಅದಷ್ಟು ವರ್ಷಗಳ ಹಿಂದೆ ಏನಾಗಿತ್ತೆಂದು ತಿಳಿಯಲು ಕೇನಿಗ್ ಅದ್ನಾನ್ ಮತ್ತು ಕೊಲೆಯಾದ ಹುಡುಗಿಯ ಸ್ನೇಹಿತರನ್ನು, ಪರಿವಾರದವರನ್ನು ಸಂದರ್ಶಿಸುತ್ತಾರೆ. ಕೊಲೆಯಾದ ಹುಡುಗಿಯ ಪರಿವಾರ ಸೀರಿಯಲ್ ನಲ್ಲಿ ಭಾಗಿಯಾಗಲಿಲ್ಲ. ಪ್ರತಿಯೊಂದು ಎಪಿಸೋಡ್ ನಿಲ್ಲಿಸಲಾಗಿದ್ದ ರೀತಿ ಹೇಗಿತ್ತೆಂದರೆ ಒಂದು ವಾರ ಮುಂದಿನ ಕಂತು ಬರುವವರೆಗೂ ಕೇಳುಗರು ಇಂಟರ್ನೆಟ್ ನಲ್ಲಿ, ಟಿವಿ, ಪತ್ರಿಕೆ, ಬ್ಲಾಗ್ ಗಳಲ್ಲಿ ಸೀರಿಯಲ್ ನ ಬಗ್ಗೆ, ಮುಂದೇನಾಗಬಹುದು ಎಂದು ಚರ್ಚಿಸುತ್ತಿದರು. ಅದೆಷ್ಟೋ ಜನ ಮನೆಯ ಚೇರ್ ನಲ್ಲಿ ಕುಳಿತೆ ಪತ್ತೆದಾರರಾದರು. ಈ ಕೊಲೆ ಪ್ರಕರಣದಲ್ಲಿ ಸಾಕ್ಷಿಯಾದ ಹಲವರನ್ನು ಕೇನಿಗ್ ಮತ್ತು ಅವರ ತಂಡ ಹುಡುಕಿ ಸಂದರ್ಶಿಸುತ್ತದೆ. ಮರೆಯಲು ಪ್ರಯತ್ನಿಸಿದ ಘಟನೆಯನ್ನು ಪುನಃ ಕೆದುಕಿಹಾಕಿ, ಕೆಲವೊಂದು ಬಾರಿ ಬೆನ್ನು ಹತ್ತಿ ಹಿಂಸಿಸಿದರೆಂಬ ಭಾವನೆ ಬರುತ್ತದೆ. ಹಲವರ ವಯ್ಯಕ್ತಿಕ ವಿಷಯಗಳನ್ನು ಇಡೀ ಜಗತ್ತಿನ ಮುಂದೆ ತಂದಿಟ್ಟು ಅವರ ಜೀವನವನ್ನು ಅಪಾಯಕ್ಕೆ ಒಳಪಡಿಸಿದ ಆರೋಪ ಸೀರಿಯಲ್ ಮೇಲೆ ಬಂದಿತ್ತು. ಇಷ್ಟೆಲ್ಲಾ ಕೇವಲ ಜನರ ಮನೋರಂಜನೆಗೆಂಬ ಉದ್ದೇಶದಿಂದ ಎಂಬುದು ಇಲ್ಲಿಯ ಗಮನಾರ್ಹ ವಿಷಯ.

ಸೀರಿಯಲ್ ನಿಂದಾಗಿ ಅದ್ನಾನ್ ನ ಕೇಸ್ ಮತ್ತೆ ತೆರದು, ತನಿಕೆಯಲ್ಲಿ ಏನಾದರು ತಪ್ಪಾಗಿರಬಹುದೇ ಎಂದು ನೋಡಲಾಗುತ್ತಿದೆ. ಬಲವಾದ ಸಾಕ್ಷಿಗಳಿಲ್ಲದೆ, ಅಥವಾ ತನಿಕೆಯಲ್ಲಿ ಅದೇನೋ ತಪ್ಪಿನಿಂದಾಗಿ ಅದೆಷ್ಟೋ ನಿರಪರಾದಿಗಳು ಜೈಲು ವಾಸಮಾಡುತ್ತಿರುವ ಉದಾಹರಣೆಗಳು ಪ್ರತಿಯೊಂದು ರಾಷ್ಟ್ರದ ಕಾನೂನು ಚೌಕಟ್ಟಿನೊಳಗೆ ಕಂಡುಬರುತ್ತದೆ. ಯಾವುದೇ ಒಂದು ಅನ್ಯಾಯವನ್ನು ಸರಿಪಡಿಸುವ ಪ್ರಯತ್ನ ಮಾಡುವ ಕಾರ್ಯಕ್ರಮವನ್ನು ಪ್ರಶಂಸಿಸಲೇಬೇಕು. ಹೀಗೆ ಒಂದೆಡೆ ಜನರನ್ನು ಹಿಡಿದಿತ್ತು ಮನೋರಂಜಿಸಿದ ಶೋ ಸೀರಿಯಲ್ ಆದರೆ, ಇನ್ನೊಂದೆಡೆ ಜನರ ವ್ಯಯಕ್ತಿಕ ಹಕ್ಕುಗಳ ಬಗ್ಗೆ, ಮಾಧ್ಯಮ, ವರದಿಗಾರಿಕೆ, ಪತ್ರಿಕೋದ್ಯಮದಲ್ಲಿ ಎಷ್ಟರ ಮಟ್ಟಿಗೆ ಯಾವುದೇ ಒಂದು ಕೇಸಿನ ಪರ ಅಥವಾ ವಿರೋಧ ಪಕ್ಷಪಾತ ಮಾಡಬಹುದು, ಎಂಬೆಲ್ಲಾ ಪ್ರಶ್ನೆಗಳು ಮೂಡಿಬಂದವು, ಬಹಳಷ್ಟು ಚರ್ಚೆಗೊಂಡವು.

ಪತ್ರಿಕೋದ್ಯಮದಲ್ಲಿ, ಒಂದು ಪತ್ರಿಕೆ, ಟೀವಿ ಚ್ಯಾನೆಲ್ ನ ವರದಿಗಳಲ್ಲಿ ನಿಷ್ಪಕ್ಷಪಾತವಿದೆ/ಇರಬೇಕು ಎಂಬುವ ನಂಬಿಕೆ ದಿನ ಕಳೆದಂತೆ ಪ್ರಸ್ತುತತೆ ಕಳೆದುಕೊಳ್ಳುತ್ತಿದೆ. ಮಾಧ್ಯಮಕ್ಕೆ, ಅದು ಯಾವುದೇ ಇರಬಹುದು, ಸಮಾಜದಲ್ಲಿ, ಅದರ ಗ್ರಾಹಕರತ್ತ ಒಂದು ಜವಾಬ್ದಾರಿ ಇರಬೇಕು ಎನ್ನುವ ವಿಷಯ ಇತ್ತೀಚಿಗೆ ಹಾಸ್ಯಾಸ್ಪದವೆನಿಸುತ್ತದೆ. ಎಂಟರ್ಟೈನ್ಮೆಂಟ್, ಮನೋರಂಜನೆಯ ಹೆಸರಿನಲ್ಲಿ ತಮ್ಮದೇ ಆದ ಸಿದ್ಧಾಂತಗಳನ್ನು ಶೃಸ್ಟಿಸಲು ಉತ್ತೇಜಿಸುವ, ತಿದ್ದಿದ ವೀಡಿಯೊಗಳನ್ನು ತೋರಿಸಿ ಅದನ್ನೇ ಸತ್ಯವೆಂಬಂತೆ ಪ್ರತಿಪಾದಿಸಿ ಅದರಿಂದಾಗಬಹುದಾದ ಹಾನಿ ಮೊನ್ನೆಯಷ್ಟೇ ನಡೆದ ವಿಷಯ.

ಜವಾಹರ್ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಕನಯ್ಯ ಕುಮಾರ್ ಮಾಡಿದ ಭಾಷಣದ ವೀಡಿಯೊವನ್ನು ತಿದ್ದುಪಡಿ ಮಾಡಿ ಅವನು ರಾಷ್ಟ್ರದ ವಿರುದ್ದ ಘೋಷಣೆಗಳನ್ನು ಮಾಡಿದಂತೆ ತೋರಿಸುವ ಆ ಕ್ಲಿಪ್ ಅನ್ನು ರಾಷ್ಟೀಯ ಟೀವಿ ಚ್ಯಾನೆಲ್ ಗಳು ತೋರಿಸಿದವು. ನಂಬಬಹುದಾದ, ದೃಡವಲ್ಲದ ಮೂಲಗಳಿಂದ ಬಂದ ವೀಡಿಯೊವನ್ನು ತೋರಿಸಿದರೂ ಅದರ ಮೂಲ ತಿಳಿದಿಲ್ಲ ಎಂದು ವೀಕ್ಷಕರಿಗೆ ತಿಳಿಸುವ ಕರ್ತವ್ಯ ಚ್ಯಾನೆಲ್ ಗಿದೆ. ಹೀಗೆ ಮಾಡದೆ, ವಿದ್ಯಾರ್ಥಿಗಳನ್ನು ಯಾವುದೇ ಪುರಾವೆಗಳಿಲ್ಲದೆ ಆತಂಕವಾದಿಗಳು, ಅಂತಿ-ನ್ಯಾಷನಲ್ ಎಂದು ಕರೆಯುವ ಮಾಧ್ಯಮ ಅಪಾಯಕರವಾದುದ್ದು.

ಜೆಏನ್ ಯು ವಿದ್ಯಾರ್ಥಿಗಳ ಮೇಲಿರುವ ಕೇಸುಗಳು ಕಾನೂನು ರೀತಿಯಲ್ಲಿ ನಡೆಯಬಹುದು ಎಂಬ ನಂಬಿಕೆ ಇಟ್ಟುಕೊಳ್ಳುವುದನ್ನು ಬಿಟ್ಟು ಬೇರೆ ವಿಧಿ ಕಂಡುಬರುವುದಿಲ್ಲ.ಅದೆಷ್ಟೋ ಜನರ ಮನಸ್ಸಿನಲ್ಲಿ ಈ ಕೇಸಿನ ಬಗ್ಗೆ, ಆ ವಿದ್ಯಾರ್ಥಿಗಳ ಬಗ್ಗೆ ಈಗಾಗಲೇ ಮಾಸಿಹೋಗದಂತ ಅಭಿಪ್ರಾಯಗಳು ಮೂಡಿಬಂದಾಗಿವೆ. ಮಿತಿಮೀರಿದ ಪ್ರಮಾಣದಲ್ಲಿ ಒಂದೇ ದೃಷ್ಟಿಕೋನದಿಂದ ಹೇಳುವ ಕಥಾ ನಿರೂಪಣೆ ಘೋರ ಸುಳ್ಳನೂ ಸಹ ದೃಡವಾದ ಸತ್ಯವನ್ನಾಗಿ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ಕಥೆಯ ಪ್ರಬಲತೆ ಇಲ್ಲೇ ಇರುವಂತದ್ದು.

ಕಾಲ್ಪನಿಕವೆಂಬಂತದ್ದನ್ನು ವಿನೋದಕ್ಕೆಂದು ಸೀರಿಯಲ್ ನ ರೂಪದಲ್ಲಿ ತೋರಿಸಬಹುದು. ಸತ್ಯವನ್ನು ತಿರುಚಿಸಿ ಎಂಟರ್ಟೈನ್ಮೆಂಟ್ ಮಾಡುವ ಯಾವುದೇ ಒಂದು ರಾಷ್ಟ್ರದ ಮಾಧ್ಯಮ ಬಹಳ ಅಪಾಯಕಾರಿಯಾದದ್ದು. ವರದಿ ಆದುದ್ದೆಲ್ಲ ದೃಡ ಸತ್ಯವಲ್ಲ ಎಂಬುದು ನೆನಪಿಡಬೇಕಾದ ದಿನಗಳಿವು. ಕಥೆಗಾರ ಬೆಂಕಿಯ ಸುತ್ತ ಹೆಣೆಯುವ ಕಥೆ ಅದೇನೇ ಇರಬಹುದು, ಅದನ್ನು ಒಂದಿಷ್ಟು ಸಂದೇಹವಿಟ್ಟುಕೊಂಡು ಗ್ರಹಿಸುವ ಪ್ರವೃತ್ತಿ ಬೆಳೆಸಿಕೊಂದಷ್ಟು ಬೇಗ ನಮಗೊಳ್ಳೆದು.

No comments: